Tue,May14,2024
ಕನ್ನಡ / English

ಅನೇಕ ಶಾಸಕರು ಕಾಂಗ್ರೆಸ್ ಸೇರಲು ಆಸಕ್ತಿ ತೋರಿದ್ದಾರೆ: ಡಿಕೆ ಶಿವಕುಮಾರ್ | ಜನತಾ ನ್ಯೂಸ್

17 Jul 2021
2866

ಕಲಬುರಗಿ : ಕಾಂಗ್ರೆಸ್ ಸೇರಲು ಅನೇಕ ಶಾಸಕರು ಮತ್ತು ಇತರ ರಾಜಕೀಯ ಪಕ್ಷಗಳ ಕಾರ್ಯಕರ್ತರು ಆಸಕ್ತಿ ತೋರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಗೆ ತೆರಳುವ ಮೊದಲು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆ ಮತ್ತು ಮಾಜಿ ಸಚಿವ ಎಂ.ಬಿ ಪಾಟೀಲ್ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಆಸಕ್ತಿ ತೋರಿಸಿದ ಶಾಸಕರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದರು.

ಅನ್ಯ ಪಕ್ಷಗಳ ಬಹಳಷ್ಟು ಮಂದಿ ಲಿಂಗಾಯತ ಸಮುದಾಯದ ನಾಯಕರು, ಕಾರ್ಯಕರ್ತರು ನಮ್ಮ ಪಕ್ಷದತ್ತ ಮುಖ ಮಾಡಿದ್ದಾರೆ. ನಮ್ಮ ಪಕ್ಷ ದಲ್ಲಿ ಎಂ.ಬಿ ಪಾಟೀಲ್, ಎಸ್.ಆರ್. ಪಾಟೀಲ್, ಈಶ್ವರ್ ಖಂಡ್ರೆ ಅವರು ಸೇರಿದಂತೆ ಸಮುದಾಯದ ಅನೇಕ ನಾಯಕರು ಇದ್ದಾರೆ.

ಬಿಜೆಪಿಯವರು ಲಿಂಗಾಯತ ಸಮುದಾಯವನ್ನು ಅವರ ಆಸ್ತಿ ಎಂದು ಭಾವಿಸಿದ್ದಾರೆ. ಆದರೆ ಅದು ಸತ್ಯ ಅಲ್ಲ. ನಮ್ಮಲ್ಲೂ ಲಿಂಗಾಯತ ಸಮುದಾಯದ ಶಾಸಕರು ಇದ್ದಾರೆ, ನಾಯಕತ್ವ ಗುಣ ಇರುವವರೂ ಇದ್ದಾರೆ. ಈ ಸಮುದಾಯದ ಅನೇಕ ನಾಯಕರು ನಮ್ಮ ಪಕ್ಷ ಸೇರಲು ಮುಂದೆ ಬಂದಿದ್ದಾರೆ. ಈಗಲೇ ಆ ಬಗ್ಗೆ ಹೆಚ್ಚಿನ ವಿವರ ನೀಡುವುದಿಲ್ಲ. ಅವರನ್ನು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಸೇರಿಸಿ ಕೊಳ್ಳುವಾಗ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿಯಾಗಲು ಮ್ಯೂಸಿಕಲ್ ಚೇರ್ ಆಟ ಪ್ರಾರಂಭವಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಮ್ಯೂಸಿಕಲ್ ಚೇರ್ ಆಟ ಆಡುತ್ತಿರುವವರು ಯಾರೂ ಎಂದು ಎಲ್ಲರೂ ತಿಳಿದಿದ್ದಾರೆ.

ಯಡಿಯೂರಪ್ಪನವರನ್ನು ಸಿಎಂ ಕುರ್ಚಿಯಿಂದ ಇಳಿಸಲು ಅನೇಕ ಬಿಜೆಪಿ ಶಾಸಕರು ದೆಹಲಿಗೆ ಹೋಗಿ ಬರುತ್ತಿದ್ದಾರೆ. ಇನ್ನು ಯಡಿಯೂರಪ್ಪನವರ ಬೆಂಬಲಿಗರು ಬಿಎಸ್ವೈ ತಲೆದಂಡಕ್ಕೆ ಒತ್ತಾಯಿಸುವವರ ಮೇಲೆ ಕ್ರಮ ಕೈಗೊಳ್ಳುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರು ತಿಳಿಸಿದ್ದಾರೆ.

ಚುನಾವಣೆ ಇನ್ನು ದೂರವಿದೆ. ಕೊರೋನಾ ಆತಂಕದಿಂದಾಗಿ ನಾವು ಸಾರ್ವಜನಿಕ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನರೊಂದಿಗೆ ಸಂಪರ್ಕದಲ್ಲಿರುವುದು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವುದು ರಾಜಕೀಯ ಪಕ್ಷಗಳ ಕರ್ತವ್ಯವಾಗಿದೆ. ಕಾಂಗ್ರೆಸ್ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡುವ ಮೂಲಕ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುತ್ತಿದ್ದಾರೆ ಎಂದರು.

RELATED TOPICS:
English summary :DKShivakumar

ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ದೆಹಲಿ ಸಿಎಂ ನಿವಾಸದಲ್ಲಿ ಆಪ್ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ : ಭಾರಿ ಚರ್ಚೆ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಅದಾನಿ, ಅಂಬಾನಿ ಹಣದ ಬ್ಯಾಗ್ ನಿರೀಕ್ಷೆ ಬಗ್ಗೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ- ಬಿಜೆಪಿ ವಾಗ್ದಾಳಿ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪಾಕ್ ಆಕ್ರಮಿತ ಜಮ್ಮುಕಾಶ್ಮೀರದಲ್ಲಿ ನಾಗರಿಕ ಯುದ್ಧ ಪರಿಸ್ಥಿತಿ ಉದ್ಭವ : ಗಾಳಿಯಲ್ಲಿ ಗುಂಡು, ಪೊಲೀಸರ ಪ್ರತಿಭಟನಾಕಾರರ ಘರ್ಷಣೆ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಪ್ರಧಾನಿ ಮೋದಿ ಏನು ಹೇಳಿದರೂ ತೂಕವಿಲ್ಲ - ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
ಚುನಾವಣಾ ಪ್ರಚಾರಕ್ಕಾಗಿ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
ಲಷ್ಕರ್-ಎ-ತೋಯ್ಬಾ ಕಮಾಂಡರ್ ಸೇರಿ, ಮೂವರು ಉಗ್ರರನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಪಡೆ
ಲಷ್ಕರ್-ಎ-ತೋಯ್ಬಾ ಕಮಾಂಡರ್ ಸೇರಿ, ಮೂವರು ಉಗ್ರರನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಪಡೆ
ಪೂರ್ವದಲ್ಲಿರುವ ಭಾರತೀಯರು ಚೀನಿಯರಂತೆ ... ದಕ್ಷಿಣದ ಜನರು ಆಫ್ರಿಕಾದಂತೆ ಕಾಣುತ್ತಾರೆ - ಹಿರಿಯ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ
ಪೂರ್ವದಲ್ಲಿರುವ ಭಾರತೀಯರು ಚೀನಿಯರಂತೆ ... ದಕ್ಷಿಣದ ಜನರು ಆಫ್ರಿಕಾದಂತೆ ಕಾಣುತ್ತಾರೆ - ಹಿರಿಯ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ
ಕಾಂಗ್ರೆಸ್ ಆಡಳಿತದಲ್ಲಿ ನೀವು ವಂಚಿತರಾಗಿದ್ದೀರಾ? ಮುಸ್ಲಿಂ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು - ಪ್ರಧಾನಿ ಮೋದಿ
ಕಾಂಗ್ರೆಸ್ ಆಡಳಿತದಲ್ಲಿ ನೀವು ವಂಚಿತರಾಗಿದ್ದೀರಾ? ಮುಸ್ಲಿಂ ಸಮುದಾಯ ಆತ್ಮಾವಲೋಕನ ಮಾಡಿಕೊಳ್ಳಬೇಕು - ಪ್ರಧಾನಿ ಮೋದಿ
ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ಮೋದಿ : ಮೆಗಾ ರೋಡ್‌ಶೋ ನಲ್ಲಿ ಭಾಗಿ
ಅಯೋಧ್ಯೆಗೆ ಭೇಟಿ ನೀಡಿದ ಪ್ರಧಾನಿ ಮೋದಿ : ಮೆಗಾ ರೋಡ್‌ಶೋ ನಲ್ಲಿ ಭಾಗಿ
 ಕೋವಿಡ್ ಲಸಿಕೆ ನೀಡಿದಕ್ಕಾಗಿ ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ಕೋವಿಡ್ ಲಸಿಕೆ ನೀಡಿದಕ್ಕಾಗಿ ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ
ರಾಯ್‌ಬರೇಲಿಯಿಂದ ಉಮೇದುವಾರಿಕೆ : ಭಾರಿ ಮುಜುಗರಕ್ಕೆ ಈಡಾದ ರಾಹುಲ್ ಗಾಂಧಿ
ರಾಯ್‌ಬರೇಲಿಯಿಂದ ಉಮೇದುವಾರಿಕೆ : ಭಾರಿ ಮುಜುಗರಕ್ಕೆ ಈಡಾದ ರಾಹುಲ್ ಗಾಂಧಿ
ಅಮೇಥಿಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ  ಗಾಂಧಿಗಳು : ರಾಯ್ಬರೇಲಿಯಿಂದ ಸ್ಪರ್ಧಿಸಲಿರುವ ರಾಹುಲ್ ಗಾಂಧಿ
ಅಮೇಥಿಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ ಗಾಂಧಿಗಳು : ರಾಯ್ಬರೇಲಿಯಿಂದ ಸ್ಪರ್ಧಿಸಲಿರುವ ರಾಹುಲ್ ಗಾಂಧಿ

ನ್ಯೂಸ್ MORE NEWS...